ಬೇರೆ ಯಾವ ರಾಷ್ಟ್ರದ ಸೈನಿಕರು ಮಾಡದಿದ್ದ ಕೆಲಸ ಮಾಡಿ ವಿಶ್ವದ ಮೆಚ್ಚುಗೆಗೆ ಪಾತ್ರವಾಯ್ತು ಭಾರತೀಯ ಸೇನೆ!

ಇಂದು ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಕೇಳಿ ಬರುತ್ತಿರುವ ಏಕೈಕ ಮಾತು ಏನಪ್ಪಾ ಅಂದ್ರೆ ಕೊರೊನಾ! ಚೀನಾದಲ್ಲಿ ಹುಟ್ಟಿ ಇದೀಗ ವಿಶ್ವದೆಲ್ಲೆಡೆ ಸಾವಿನ ಕೇಕೆ ಹಾಕುತ್ತಿರುವ ಈ ವೈರಸ್ ನಿಯಂತ್ರಣ ಮಾಡುವುದು ಹೇಗೆ ಎಂದು ತೋಚದೆ ಎಲ್ಲಾ ರಾಷ್ಟ್ರಗಳು ತಲೆ ಮೇಲೆ ಕೈ ಹಾಕಿ ಕುಳಿತಿದೆ. ಭಾರತವೂ ಈ ಕೋವಿಡ್ 19 ಆಟಾಟೋಪಕ್ಕೆ ಬೆಚ್ಚಿ ಬಿದ್ದಿದ್ದು, ಇದರ ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 21 ದಿನಗಳ ಕಾಲ ಸಂಪೂರ್ಣ ಬಂದ್ ಗೆ ಕರೆ ನೀಡಿದ್ದಾರೆ.ಮೋದಿಯವರು ಬಂದ್ ಗೆ ಕರೆ ನೀಡಿದ್ದರೂ ಇದರ ನಿಯಂತ್ರಣ ಜನರ ಕೈಯಲ್ಲೇ ಇದೆ. ಭಾರತಿಯರಿಗೆ ಪ್ರಸ್ತುತ ಈ ವೈರಸ್ ನ ತೀವ್ರತೆ ಅರ್ಥ ಆಗದೇ ಇರುವುದು ಚಿಂತೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೋವಿಡ್ 19 ಮೂರನೇ ಸ್ಟೇಜ್ ಗೆ ತೆರಳಿದಲ್ಲಿ ಅದರ ನಿಯಂತ್ರಣಕ್ಕೆ ಸರಕಾರ ಸರ್ವ ವಿಧದಲ್ಲೂ ತಯಾರಿ ಆಗುತ್ತಿದೆ. ಇದೀಗ ಕೊರೊನಾ ನಿಯಂತ್ರಣಕ್ಕಾಗಿ ಭಾರತೀಯ ಸೇನೆ ಸರಕಾರದ ನೆರವಿಗೆ ಧಾವಿಸಿದ್ದು, ತಮ್ಮ ಒಂದು ದಿನದ ವೇತನ 34 ಕೋಟಿ ರೂಪಾಯಿಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಇದು ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

Comments