ಉತ್ತರ ಪ್ರದೇಶದಲ್ಲಿ ಲಾಕ್ ಡೌನ್ ನಡುವೆ ಸುತ್ತಾಡುವ ಜನರಿಗೆ ಅಲ್ಲಿನ ಸರ್ಕಾರ ಹೇಗೆ ತಪಾಸಣೆ ನಡೆಸುತ್ತಿದೆ ನೋಡಿ

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ, ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದಿಟ್ಟ ಕ್ರಮ ಕೈಗೊಂಡಿದೆ. ಉತ್ತರ ಪ್ರದೇಶ ರಾಜ್ಯದಾದ್ಯಂತ ಪಾನ್ ಮಸಾಲಾ ಉತ್ನನ್ನಗಳ ಉತ್ಪಾದನೆ, ಸಾಗಾಟ ಹಾಗೂ ಮಾರಾಟವನ್ನು ನಿಷೇಧಿಸಿದೆ. ಪಾನ್ ಮಸಾಲಾ ಸೇವಿಸುವ ಜನ ಅದನ್ನು ಎಲ್ಲೆಂದರಲ್ಲಿ ಉಗಿಯುವ ಕಾರಣ, ಸರ್ಕಾರ ಈ ಕ್ರಮ ಕೈಗೊಂಡಿದೆ. ಉಗುಳುವುದರಿಂದಲೂ ಕೊರೊನಾ ವೈರಸ್ ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ. ಇನ್ನು ಲಾಕ್ ಡೌನ್ ನಡುವೆ ಸುತ್ತಾಡುವ ಜನರಿಗೆ ವಿದೇಶದಲ್ಲಿ ನಡೆಸುವ ತಪಾಸಣೆ ಮಾದರಿ ತಪಾಸಣೆಯನ್ನು ನಡೆಸುತ್ತಿದ್ದು ,ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಗೊಂಡಿದ್ದು ,ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ..ವಿಡಿಯೋ ನೋಡಿ

Comments