ಜನರೇ ಇಲ್ಲದೇ ಇರೋ ತಿರುಪತಿ ಈಗ ಹೇಗಿದೆ ಗೊತ್ತಾ!?

ತಿರುಪತಿ ಹಿಂದೂಗಳ ಪಾಲಿನ ಪ್ರಮುಖ ಶ್ರದ್ದಾಕೇಂದ್ರ! ಪ್ರತಿನಿತ್ಯ ಎಂಬಂತೆ ಈ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ದರ್ಶನ ಮಾಡುತ್ತಾರೆ. ದಿನನಿತ್ಯವೂ ಜನಜಂಗುಳಿಯಿಂದ ತುಂಬಿ ತುಳುಕೋ ಈ ಪವಿತ್ರ ಕ್ಷೇತ್ರ ಈ ಹಿಂದೆ ಇತಿಹಾಸದಲ್ಲಿ ನಡೆದಿದ್ದ ಆ ಒಂದು ಘಟನೆ ಬಿಟ್ಟು ಆ ಬಳಿಕ ಯಾವುದೇ ಕಾರಣಕ್ಕೂ ಬಂದ್ ಆದ ಉದಾಹರಣೆಗಳಿಲ್ಲ. ಇದೀಗ ಕೋವಿಡ್ 19 ನಿಂದಾಗಿ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ತತ್ತರಿಸಿ ಹೋಗಿದ್ದು ಸಂಪೂರ್ಣ ಬಂದ್ ಆಗಿವೆ. ಇಂತಹ ಸಮಯದಲ್ಲಿ ಇದೀಗ ತಿರುಪತಿ ತಿಮ್ಮಪ್ಪನ ತಿರುಮಲ ಬೆಟ್ಟದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವನ್ಯಪ್ರಾಣಿಗಳು ಯಾರದ್ದೇ ಭಯವಿಲ್ಲದೇ ಸ್ವಚ್ಛಂದವಾಗಿ ವಿಹರಿಸುವ ವಿಡಿಯೋ ಒಂದು ಸೆರೆಯಾಗಿದೆ ಈ ವಿಡಿಯೋವನ್ನು ನೀವು ಒಮ್ಮೆ ನೋಡಿ


Comments