ಕೊರೊನಾ ಚಿಕಿತ್ಸೆಗೆ ಎರಡೇ ವಾರದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಿದ ಅಂಬಾನಿ! ಆ ಆಸ್ಪತ್ರೆ ಹೇಗಿದೆ ನೋಡಿ!

ಕೊರೊನಾ ಇದೀಗ ಭಾರತದಲ್ಲಿಯೂ ತನ್ನ ಅಟ್ಟಹಾಸವನ್ನು ಮೆರೆಯಲು ಪ್ರಾರಂಭ ಮಾಡಿದ್ದು, ಭಾರತ 21 ದಿನಗಳ ಕಾಲ ಸಂಪೂರ್ಣ ಬಂದ್ ಆಗಿದೆ. ಕರ್ನಾಟಕ ಕೊರೊನಾ ಶಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಕೊರೊನಾ ವಿರುದ್ಧ ಹೋರಾಡಲು ಸಕಲ ಕ್ರಮಗಳನ್ನು ರೂಪಿಸುತ್ತಿದ್ದು, ಈ ವೈರಸ್ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯವಾಗಿದೆ. ಕೊರೊನಾ ವಿರುದ್ಧ ಹೋರಾಡಲು ದೇಶದ ಶ್ರೀಮಂತರು ಇದೀಗ ಸರಕಾರದ ಜೊತೆ ಕೈಜೋಡಿಸುತ್ತಿದ್ದು, ಇದೀಗ ರಿಲಯನ್ಸ್ನ ಮುಖೇಶ್ ಅಂಬಾನಿ ಅವರು ಕೇವಲ ಎರಡೇ ವಾರದಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿರತಕ್ಕಂತಹ ಅತ್ಯಾಧುನಿಕ ನೂರು ಬೆಡ್ ಗಳ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಇದರೊಂದಿಗೆ ಐದು ಕೋಟಿ ರೂಪಾಯಿಗಳನ್ನು ಮಹಾರಾಷ್ಟ್ರ ಸಿಎಂ ನಿಧಿಗೆ ದಾನ ಮಾಡಿದ್ದು ಇದು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.

Comments